Menu
Log in


ಸ್ವಗ್ರಾಮ ಫೆಲೋಶಿಪ್

ನಮ್ಮ ಗ್ರಾಮ ನಮ್ಮ ಹೆಮ್ಮೆ

ಬನ್ನಿ ಸ್ವಾವಲಂಬೀ ಗ್ರಾಮ ಸ್ವರಾಜ್ಯದ ಮೂಲಕ ಆತ್ಮನಿರ್ಭರ ಭಾರತಕ್ಕಾಗಿ
ನವನಿರ್ಮಾಣದ ಹೊಸಮನ್ವಂತರಕ್ಕೆ ಸಂಕಲ್ಪ ಮಾಡೋಣ.

ಸ್ವಾತಂತ್ರದ ಅಮೃತ ಮಹೋತ್ಸವದ ಈ ಕಾಲಘಟ್ಟದಲ್ಲಿ ಗ್ರಾಮ ಸ್ವರಾಜ್ಯದ ಚರ್ಚೆ ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಹಳ್ಳಿಗಳ ದೇಶವಾಗಿರುವ ಭಾರತದಲ್ಲಿ ಸ್ವಾವಲಂಬಿ ಗ್ರಾಮಗಳು ಇಂದಿಗೂ ಕೇವಲ ಆದರ್ಶವಾಗಿವೆ. ಸಹಸ್ರಮಾನಗಳಿಂದ ಚಿಂತಕರುಗಳನ್ನು ವಿಸ್ಮಿತರಾಗಿಸಿದ್ದ ಈ ಗ್ರಾಮ ಸ್ವರಾಜ್ಯವೇ ಸನ್ನಡತೆ, ಸಚ್ಚಾರಿತ್ರ್ಯ, ಸಂಸ್ಕಾರಯುತ ನಾಗರೀಕರನ್ನು ನೀಡಿರುವುದು ನಮ್ಮೆಲ್ಲರ ಅನುಭವ.

ಭಾರತೀಯ ಸಂಸ್ಕೃತಿಯ ಮೂಲಸ್ರೋತವಾದ ಗ್ರಾಮಗಳ ಪರಿಸ್ಥಿತಿ ಸ್ವತಂತ್ರ ಭಾರತದಲ್ಲಿ ಅಧೋಗತಿಯೆಡೆಗೆ ಪಯಣಿಸುತ್ತಿದೆ. ಭಾರತದಲ್ಲಿ ಒಂದುವರೆ ಶತಮಾನಗಳಿಂದ ಗ್ರಾಮೋತ್ಥಾನದ ಕುರಿತು ಆಗಾಧ ಚಿಂತನೆಗಳು ಮತ್ತು ಪ್ರಯೋಗಗಳು ನಿರಂತರವಾಗಿ ನಡದೇ ಇವೆ. ಆದರೂ ಇಂದು ಗ್ರಾಮೋತ್ಥಾನ ಮರಿಚಿಕೆಯಾಗಿಯೇ ಉಳಿದಿದೆ. ಹಾಗೆಂದ ಮಾತ್ರಕ್ಕೆ ಗ್ರಾಮೋತ್ಥಾನ ಅವಗಣನೆಗೆ ಒಳಪಟ್ಟಿದೆಯೆಂದಲ್ಲ. ಕೆಲವರು ಶಿಕ್ಷಣವನ್ನೋ, ಆರೋಗ್ಯವನ್ನೋ, ಕೃಷಿಯನ್ನೋ, ಕೇಂದ್ರವಾಗಿರಿಸಿಕೊಂಡು ಗ್ರಾಮೋತ್ಥಾನಕ್ಕಾಗಿ ಸಾಕಷ್ಟು ದುಡಿದದ್ದೂ ಇದೆ. ಸರ್ವೋದಯದಂತಹ ಮಾದರಿಗಳೂ ನಮ್ಮ ಮುಂದಿವೆ. ಸರ್ಕಾರಗಳು ಗ್ರಾಮಾಭ್ಯುದಯದ ಸರಿಯಾದ ಮಾದರಿಗಳಿಗಾಗಿ ಹುಡುಕಾಡುತ್ತಲೇ ಇವೆ. ಇವೆಲ್ಲದರ ನಡುವೆ ಗ್ರಾಮಗಳು ಮತ್ತು ಗ್ರಾಮಸ್ಥರು ಸರ್ವತೋಮುಖವಾಗಿ ಹಿನ್ನೆಲೆಗೆ ಸರಿಯುತ್ತಿರುವುದು ಅಷ್ಟೇ ಸತ್ಯ. ಈ ಮಾದರಿಗಳು ಗ್ರಾಮದ ಸ್ವಭಾವ ಮತ್ತು ಅಂತಸತ್ವವನ್ನು ಗುರುತಿಸದೆ, ಪಶ್ಚಿಮದಿಂದ ಎರವಲುಪಡೆದ ಪರಕೀಯ ಮತ್ತು ಭೌತಿಕ ಅಭಿವೃದ್ಧಿಯ ಮಾದರಿಗಳ ಕಡೆಗೆ ಒತ್ತಾಯಪೂರ್ವಕವಾಗಿ ಗ್ರಾಮಗಳನ್ನು ದೂಡಿ, ಗ್ರಾಮ ಸ್ವರಾಜ್ಯವೆಂದರೆ ಪರಾವಲಂಬನೆ ಎನ್ನುವಂತೆ ಮಾಡಿವೆ. ಅಷ್ಟೇ ಅಲ್ಲ ಗ್ರಾಮ ವಿಕಾಸದ ಈ ಮಾದರಿಗಳು ಪರಂಪಾರನುಗತ ಕ್ರಿಯಾಜ್ಞಾನವನ್ನು ಅನುಪಯುಕ್ತವೆಂಬಂತೆ ಬಿಂಬಿಸಿವೆ. ಗ್ರಾಮವೊಂದರ ಅಂತಃಸತ್ವದ ಆಧಾರದ ಮೇಲೆ ಗ್ರಾಮದ ಜನರೇ ನಿರ್ಣಯಿಸಿ ಕಟ್ಟಬೇಕಾಗಿರುವ ಸ್ವಾವಲಂಬೀ ಗ್ರಾಮವನ್ನು, ಪ್ರಭುತ್ವದ ಕೆಲವು ಕಚೇರಿಗಳ ಕೆಲಸವನ್ನಾಗಿ ಪರಿರ್ವತಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಸ್ವಾತಂತ್ರದ ಅಮೃತ ಮಹೋತ್ಸವದ ಸಂದರ್ಭದಲ್ಲಿ, ಆತ್ಮನಿರ್ಭರ ಭಾರತದ ಕನಸನ್ನು ಕಾಣಬೇಕೆಂದರೆ, ಅದು ಸ್ವಾಲವಂಬೀ ಗ್ರಾಮದ ಕಡೆಗೆ ಹೆಜ್ಜೆ ಹಾಕುವುದೆಂದೇ ಅರ್ಥ. ಈ ನಡೆ ಹೊಸತನದ ವಿರೋಧಿಯಲ್ಲ, ಬದಲಿಗೆ ಹೊಸಚಿಗುರು ಹಳೆಬೇರು ಎನ್ನುವ ವಾಕ್ಯದಂತೆ. ಹಾಗಾಗಿ ಆತ್ಮನಿರ್ಭರ ಭಾರತವೆಂದರೇ, ಸಮಗ್ರವಿಕಾಸದ ಕಲ್ಪನೆಯಡಿ, ಗ್ರಾಮಗಳ ಸ್ವಭಾವಗಳನ್ನು ಆಧರಿಸಿ, ಗ್ರಾಮಸ್ಥರೇ ನಿರ್ಣಯಿಸಿ ಕ್ರಿಯಾನ್ವಯಗೊಳಿಸುವ ಅಭ್ಯುತ್ಥಾನ ಪಥ. ಇಂತಹ ಒಂದು ಮಾದರಿಯನ್ನು ಕಾರ್ಯರೂಪಕ್ಕೆ ತರಲು ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾ ಜ್ ವಿಶ್ವವಿದ್ಯಾಲಯದ ನೇತೃತ್ವದಲ್ಲಿ, ಅನೇಕ ಸಮಾನಮನಸ್ಕ ಸಂಸ್ಥೆಗಳು ಮತ್ತು ಚಿಂತಕರು ಮೂರು ವರ್ಷದ ಒಂದು ಕ್ರಿಯಾಯೋಜನೆಯನ್ನು ಸಿದ್ಧಪಡಿಸಿದ್ದಾರೆ.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯವನ್ನು (KSRDPRU) ಸುಸ್ಥಿರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಬೋಧನೆ, ತರಬೇತಿ ಮತ್ತು ಸಂಶೋಧನೆಗಾಗಿ ಸ್ಥಾಪಿಸಲಾಗಿದೆ. ಪ್ರಸ್ತುತ, ಸದರಿ ವಿಶ್ವವಿದ್ಯಾಲಯವು ಸ್ವ-ತತ್ವದ ಆಧಾರದ ಮೇಲೆ ಗ್ರಾಮ ವಿಕಾಸವನ್ನು ಸಾಧಿಸಲು ಹಾಗೂ ಗ್ರಾಮ ವಿಕಾಸದ ಮಾದರಿಗಳನ್ನು ರೂಪಿಸಲು ಯೂತ್ ಫಾರ್ ಸೇವಾ, ಚಾಣಕ್ಯ ವಿಶ್ವವಿದ್ಯಾಲಯ, ಪ್ರಜ್ಞಾಪ್ರವಾಹ ಮತ್ತು ಕುವೆಂಪು ವಿಶ್ವವಿದ್ಯಾಲಯದ ಅಬ್ದುಲ್ ನಜೀರ್ ಸಾಬ್ ಅಧ್ಯಯನಪೀಠದ ಸಹಯೋಗದೊಂದಿಗೆ ಸ್ವಗ್ರಾಮ ಫೆಲೋಶಿಪ್ ಅನ್ನು ಆರಂಭಿಸಿದೆ. ಫೆಲೋಶಿಪ್ ಉದ್ದೇಶ: ಮೂರು ವರ್ಷ ಕಾಲಾವಧಿಯ ಗುಂಪು ಮಾದರಿಯ ಫೆಲೋಶಿಪ್ ಇದಾಗಿದ್ದು ಸದರಿ ಫೆಲೊಶಿಪ್ ಮೂಲಕ ಗ್ರಾಮದ ಸ್ವಭಾವಕ್ಕೆ ಅನುಗುಣವಾಗಿ ಗ್ರಾಮ ವಿಕಾಸದ ಮಾದರಿಗಳ ನಿರ್ಮಾಣ ಮಾಡುವ, ಪರಸ್ಪರಾವಲಂಬನೆ ಮತ್ತು ಸಹಕಾರದ ಆಧಾರದ ಮೇಲೆ ಸ್ವಾವಲಂಬೀ ಗ್ರಾಮ ನಿರ್ಮಾಣ ಮಾಡುವ ಹಾಗೂ ರಾಷ್ಟ್ರಮಟ್ಟದಲ್ಲಿ ಈ ಪ್ರಯೋಗದ ಫಲಿತಗಳನ್ನು ವಿಸ್ತರಿಸಲು ಸಮಗ್ರ ಗ್ರಾಮ ವಿಕಾಸದ ಪರಿಕಲ್ಪನೆಯ ಚೌಕಟ್ಟು ಮತ್ತು ಸಾಧನಗಳನ್ನು ಅಭಿವೃದ್ಧಿಪಡಿಸುವ ಉದ್ದೇಶಹೊಂದಲಾಗಿದೆ.

ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾನಿಲಯವನ್ನು (KSRDPRU) ಸುಸ್ಥಿರ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಬೋಧನೆ, ತರಬೇತಿ ಮತ್ತು ಸಂಶೋಧನೆಗಾಗಿ ಸ್ಥಾಪಿಸಲಾಗಿದೆ. ಪ್ರಸ್ತುತ, ಸದರಿ ವಿಶ್ವವಿದ್ಯಾಲಯವು ಸ್ವ-ತತ್ವದ ಆಧಾರದ ಮೇಲೆ ಗ್ರಾಮ ವಿಕಾಸವನ್ನು ಸಾಧಿಸಲು ಹಾಗೂ ಗ್ರಾಮ ವಿಕಾಸದ ಮಾದರಿಗಳನ್ನು ರೂಪಿಸಲು ಯೂತ್ ಫಾರ್ ಸೇವಾ, ಚಾಣಕ್ಯ ವಿಶ್ವವಿದ್ಯಾಲಯ, ಪ್ರಜ್ಞಾಪ್ರವಾಹ ಮತ್ತು ಕುವೆಂಪು ವಿಶ್ವವಿದ್ಯಾಲಯದ ಅಬ್ದುಲ್ ನಜೀರ್ ಸಾಬ್ ಅಧ್ಯಯನಪೀಠದ ಸಹಯೋಗದೊಂದಿಗೆ ಸ್ವಗ್ರಾಮ ಫೆಲೋಶಿಪ್ ಅನ್ನು ಆರಂಭಿಸಿದೆ.

ಫೆಲೋಶಿಪ್ ಉದ್ದೇಶ

ಮೂರು ವರ್ಷ ಕಾಲಾವಧಿಯ ಗುಂಪು ಮಾದರಿಯ ಫೆಲೋಶಿಪ್ ಇದಾಗಿದ್ದು ಸದರಿ ಫೆಲೊಶಿಪ್ ಮೂಲಕ ಗ್ರಾಮದ ಸ್ವಭಾವಕ್ಕೆ ಅನುಗುಣವಾಗಿ ಗ್ರಾಮ ವಿಕಾಸದ ಮಾದರಿಗಳ ನಿರ್ಮಾಣ ಮಾಡುವ, ಪರಸ್ಪರಾವಲಂಬನೆ ಮತ್ತು ಸಹಕಾರದ ಆಧಾರದ ಮೇಲೆ ಸ್ವಾವಲಂಬೀ ಗ್ರಾಮ ನಿರ್ಮಾಣ ಮಾಡುವ ಹಾಗೂ ರಾಷ್ಟ್ರಮಟ್ಟದಲ್ಲಿ ಈ ಪ್ರಯೋಗದ ಫಲಿತಗಳನ್ನು ವಿಸ್ತರಿಸಲು ಸಮಗ್ರ ಗ್ರಾಮ ವಿಕಾಸದ ಪರಿಕಲ್ಪನೆಯ ಚೌಕಟ್ಟು ಮತ್ತು ಸಾಧನಗಳನ್ನು ಅಭಿವೃದ್ಧಿಪಡಿಸುವ ಉದ್ದೇಶಹೊಂದಲಾಗಿದೆ.

ಉದ್ದೇಶಗಳು

  • ಸಮಗ್ರ ವಿಕಾಸದ ಮೇಲೆ ಗ್ರಾಮ ವಿಕಾಸ ಸಾಧಿಸುವುದು.
  • ಗ್ರಾಮದ ಸ್ವಭಾವಕ್ಕೆ ಅನುಗುಣವಾಗಿ ಗ್ರಾಮ ವಿಕಾಸದ ಮಾದರಿಗಳ ನಿರ್ಮಾಣ.
  • ಪರಸ್ಪರಾವಲಂಬನೆ ಮತ್ತು ಸಹಕಾರದ ಆಧಾರದ ಮೇಲೆ ಸ್ವಾವಲಂಬೀ ಗ್ರಾಮ ನಿರ್ಮಾಣ
  • ರಾಷ್ಟ್ರಮಟ್ಟದಲ್ಲಿ ವಿಸ್ತರಿಸಲು ಸಮಗ್ರ ಗ್ರಾಮ ವಿಕಾಸದ ಪರಿಕಲ್ಪನೆಯ ಚೌಕಟ್ಟು ಮತ್ತು ಸಾಧನಗಳನ್ನು ಅಭಿವೃದ್ಧಿಪಡಿಸುವುದು.

ಫೆಲೋಶಿಪ್‌ನ ವಿಶೇಷಗಳು

  1. ಸ್ವ ಆಧಾರಿತ ಗ್ರಾಮ ವಿಕಾಸದ ಮಾದರಿಯ ನಿರ್ಮಾಣಕ್ಕಾಗಿ ಗುಂಪು ಮಾದರಿಯ ಫೆಲೋಶಿಪ್ ಯೋಜಿಸಿದ್ದು ಅನೇಕರು ಜೊತೆಗೂಡಿ ಗ್ರಾಮ ವಿಕಾಸದಲ್ಲಿ ಭಾಗವಹಿಸಲು ಯೋಜನೆ ಅವಕಾಶ ನೀಡುತ್ತದೆ.
  2. ತನ್ನದೇ ಗ್ರಾಮವನ್ನು ವಿಕಾಸದತ್ತ ಕೊಂಡೊಯ್ಯಬೇಕು ಎಂಬ ಪ್ರತಿಯೊಂದೂ ತಂಡಕ್ಕೂ ಅಗತ್ಯವಾದ ಜ್ಞಾನ ಕೌಶಲ್ಯ ಹಾಗೂ ಮಾದರಿಗಳನ್ನು ತಜ್ಞರ ಹಾಗೂ ಸಂಸ್ಥೆಗಳ ಮೂಲಕ ಮೆಂಟರಿಂಗ್ ಒದಗಿಸಲಾಗುವುದು.
  3. ಗ್ರಾಮ ವಿಕಾಸವು ಒಂದು ವೃತ್ತಿಯೋ ಅಥವಾ ಪ್ರವೃತ್ತಿಯೋ ಆಗಿರದೇ ಅದೊಂದು ಜೀವನ ವಿಧಾನವಾಗಿರುವಂತೆ ಫೆಲೋಗಳಿಗೆ ನಿತ್ಯಜೀವನ ಜೊತೆ ಜೊತೆಗೆ ಗ್ರಾಮ ವಿಕಾಸದಲ್ಲಿ ತೊಡಗಿಸಿಕೊಳ್ಳುವ ಹಿನ್ನೆಲೆಯಲ್ಲಿ ರೂಪುಗೊಂಡಿದೆ.
  4. ಈ ಫೆಲೋಶಿಫ್ ನಲ್ಲಿ ಫೆಲೋಗಳು ಬದಲಾವಣೆಯ ಹರಿಕಾರರಲ್ಲ, ಬದಲಿಗೆ ಗ್ರಾಮಸ್ಥರೇ ಬದಲಾವಣೆಯ ರುವಾರಿಗಳು. ಈ ಜನಕೇಂದ್ರಿತ ಬದಲಾವಣೆಯ ಪ್ರಕ್ರಿಯೆಯನ್ನು ಸುಗಮಗೊಳಿಸುವ ಜವಾಬ್ದಾರಿ ಮಾತ್ರ ಫೆಲೋಗಳದ್ದು.
  5. ಒಟ್ಟಾರೆಯಾಗಿ ಗ್ರಾಮದ ಸ್ವಭಾವಕ್ಕೆ ಅನುಗುಣವಾಗಿ ಗ್ರಾಮಸ್ಥರ ಪಾಲ್ಗೊಳ್ಳುವಿಕೆಯ ಮೂಲಕ ಗ್ರಾಮದಲ್ಲಿ ಪರಿವರ್ತನೆ ಹಾಗೂ ವಿಕಾಸವನ್ನು ಅವರೇ ನಿರ್ಧರಿಸಿಕೊಳ್ಳಲು ಸಹಕಾರಿಯಾಗುವಂತೆ ಸುಗಮಗೊಳಿಸುವ ಫೆಲೋಶಿಪ್ ಇದಾಗಿದೆ.



ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 

ಶ್ರೀ ಗಿರೀಶ್ ಬಿ 9945626180


Get Involved  |  Our Impact  |  Programs  |  Chapters  |  About Us

Copyright© 2023-24. Youth For Seva. All Rights Reserved.

 Powered By   

Powered by Wild Apricot Membership Software