ಒಗ್ಗಟ್ಟಿನಲ್ಲಿ ಬಲವಿದೆ ಎಂಬಂತೆ ನಾವು, ಸರ್ಕಾರ, ಎನ್ ಎಸ್ ಎಸ್ ಸಂಘಟನೆ, ವಿದ್ಯಾ ಸಂಸ್ಥೆಗಳು ಹಾಗು ಇತರ ಸ್ವಯಂಸೇವಾ ಸಂಸ್ಥೆಗಳು ಜೊತೆಗೂಡಿ ಗ್ರಾಮಗಳತ್ತ ನಡೆದಿದ್ದೇವೆ. ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನೆಲೆಯಲ್ಲಿ ಅಮೃತ ಸಮುದಾಯ ಅಭಿವೃದ್ಧಿ
ಯೋಜನೆ ರೂಪಗೊಂಡಿದೆ.
ನಮ್ಮ ಗ್ರಾಮಗಳ ಸಮಗ್ರ ಹಾಗು ಸರ್ವತೋಮುಖ ಅಭಿವೃದ್ಧಿಯ ಕನಸು ಹೊತ್ತು, ಅಮೃತ ಸಮುದಾಯ ಅಭಿವೃದ್ಧಿ
ಯೋಜನೆ ವಿನ್ಯಾಸಗೊಂಡಿದೆ. ಈ ಕನಸನ್ನು ನನಸಾಗಿಸಲು ಯುವಕರೇ ನಮ್ಮ ಶಕ್ತಿ. ಈ ಯೋಜನೆಯಡಿಯಲ್ಲಿ 750 ಗ್ರಾಮಗಳನ್ನು 450 ಶಿಕ್ಷಣ ಸಂಸ್ಥೆಗಳು ದತ್ತು ಪಡೆದಿವೆ. ಈ ಗ್ರಾಮಗಳಲ್ಲಿ ಶಿಕ್ಷಿತ ಯುವಕರ ಮೂಲಕ ಗ್ರಾಮಗಳ ಸಾಮರ್ಥ್ಯಕ್ಕೆ ಅನುಗುಣವಾಗಿ ಹೊಸ ತಾಂತ್ರಿಕ ಅನ್ವೇಷಣಗಳನ್ನು ಅಳವಡಿಸಿ ಸಮುದಾಯಗಳ ಅಭಿವೃದ್ಧಿ ನಮ್ಮ ಗುರಿ. ಗ್ರಾಮಸ್ಥರ ಪಾಲುದಾರಿಕೆಯೊಂದಿಗೆ ಈ ಯೋಜನೆ ಜಾರಿಗೊಳ್ಳುತ್ತದೆ. ಅವರ ಅವಶ್ಯಕತೆಗಳನ್ನು ಅರಿತು, ಅವರಿಗಾಗಿ, ಅವರೊಡನೆ ಚರ್ಚಿಸಿ, ಅವರ ಗ್ರಾಮವನ್ನು ಬೆಳೆಸುವುದೇ ನಮ್ಮ ಗುರಿ.
ಹೆಚ್ಚಿನ ಮಾಹಿತಿ...