ಸೇವೆಯಲ್ಲೇ ಸಾರ್ಥಕತೆ: ನನ್ನ ವೃತ್ತಿ ರೂಪಾಂತರ

“ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ ” ಎಂದು ಹಾಡು ಹೇಳುತ್ತಾ ಜೀವನ ಸಾಗಿಸುತ್ತಿದ್ದ ಕಾಲ ಕಳೆದು ಅನೇಕ ವರ್ಷಗಳಾದವು. ಈಗೇನಿದ್ರೂ “ದುಡ್ಡೇ ದೊಡಪ್ಪ”  ಎಂಬಂತೆ ಸಮಯದ ಪರಿವಿಲ್ಲದೆ ದುಡಿಯುವುದೇ ಆಧುನಿಕ ಜೀವನ. ನಾವೊಬ್ಬರು ಚೆನ್ನಾಗಿದ್ರೆ ಸಾಕು, ಬೇರೆಯವರು ಏನಾದ್ರೆ ನಮಗೇನು ಎಂದು ಪ್ರತಿಯೊಬ್ಬರು ಬದುಕುವ ಕಾಲವಿದು. ಅಂತಹದೇ ಒಂದು ಕಗ್ಗಂಟಿಗೆ ಸಿಲುಕಿ ಒದ್ದಾಡುತ್ತಿರುವ ಬಹಳಷ್ಟು ಮಂದಿ ನಮಗೆ ದಿನನಿತ್ಯ ಜೀವನದಲ್ಲಿ ಸಿಗುತ್ತಾರೆ.

ವಿದ್ಯಾಭ್ಯಾಸ ಮುಗಿಸಿ ಮೊದಲು ಲಗ್ಗೆ ಹಾಕುವುದೇ ಬಹುರಾಷ್ಟ್ರೀಯ ನಿಗಮಗಳ  ಕಡೆ. ಕೆಲಸ ಮಾಡಿ ಹಣಗಳಿಸುವುದು ಅನಿವಾರ್ಯ ಕೂಡ.  ಇಲ್ಲಿ ವಿಶ್ವ ಮಟ್ಟದ ವಾತಾವರಣದಲ್ಲಿ ಕೆಲಸ ಮಾಡಲು ಸಿಗುತ್ತದೆ. ವಿವಿಧ ದೇಶಗಳ ಜನರ ಜೊತೆ ಕೆಲಸ ಮಾಡುವ ಅವಕಾಶ ದೊರೆಯುತ್ತದೆ. ಹೊಸ ಹೊಸ ತಂತ್ರಜ್ಞಾನಗಳನ್ನು ಕಲಿಯಬಹುದು. ಕೆಲಸದಲ್ಲಿ ಶಿಸ್ತಿನ ಮಹತ್ವ ತಿಳಿಯುತ್ತದೆ. ಸಮಯಪಾಲನೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ.ತಂಡದಲ್ಲಿ ಕೆಲಸ ಮಾಡುವ ಕೌಶಲ್ಯ ಅಭಿವೃದ್ಧಿಯಾಗುತ್ತದೆ.

ಒಟ್ಟಾರೆ ಬಹುರಾಷ್ಟ್ರೀಯ ನಿಗಮಗಳ  ಅನುಭವ ಜೀವನದಲ್ಲಿ ಮಹತ್ವದ ಪಾಠಗಳನ್ನು ಕಲಿಸುತ್ತದೆ.ಇಂತಹ ಗೋಜು ಗದ್ದಲಗಳ ನಡುವೆ ಪರಿಚಯವಾದದ್ದೇ Youth For Seva ಸಂಸ್ಥೆ. ಹಿಂದಿನ ಕೆಲಸಕ್ಕು ಇಲ್ಲಿಗು ಅಜಗಜಾಂತರ ವ್ಯತ್ಯಾಸ. ಒತ್ತಡದ ಬದುಕಿನಿಂದ ಬೇರೆಯ ಪ್ರಪಂಚಕ್ಕೆ ನಮ್ಮನ್ನು ಒಯ್ಯುತ್ತದೆ. ಕೆಲಸದ ಜೊತೆಜೊತೆಗೆ ನಮ್ಮ ಬೇರೆಲ್ಲ ಕೆಲಸಗಳನ್ನು ನೋಡಿಕೊಳ್ಳಬಹುದು. ನಮ್ಮವರಿಗೆ ಸಮಯ ಕೊಡಬಹುದು.

ಸೇವೆಯಲ್ಲೇ ಸಾರ್ಥಕತೆ: ನನ್ನ ವೃತ್ತಿ ರೂಪಾಂತರ

ಬಹುರಾಷ್ಟ್ರೀಯ ನಿಗಮ  ಉದ್ಯೋಗದಿಂದ Youth For Seva ಗೆ ಬದಲಾವಣೆ ಮಾಡುವುದು ಒಂದು ಮಹತ್ವದ ಅನುಭವವಾಗಿದೆ. ಇದು ನನ್ನ ಜೀವನದ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಿಸಿದೆ.ಬಹುರಾಷ್ಟ್ರೀಯ ನಿಗಮದಲ್ಲಿ ಮುಖ್ಯವಾಗಿ ಲಾಭ ಮತ್ತು ಗುರಿಗಳ ಮೇಲೆ ಗಮನ ಇರುತ್ತದೆ. ಆದರೆ NGOದಲ್ಲಿ ಸಮಾಜ ಸೇವೆಯೇ ಪ್ರಮುಖ ಗುರಿಯಾಗಿರುತ್ತದೆ. ಜನರ ಸಮಸ್ಯೆಗಳನ್ನು ನೇರವಾಗಿ ಅರ್ಥಮಾಡಿಕೊಳ್ಳಲು ಅವಕಾಶ ಸಿಗುತ್ತದೆ.  ತಂಡದ ಸಹಕಾರದಿಂದ ಕೆಲಸ ಮಾಡುವುದನ್ನು ಕಲಿತೆ. ವಿಭಿನ್ನ ಸಮಾಜದ ಜನರೊಂದಿಗೆ ಸಂಪರ್ಕ ಬೆಳೆಸಿದೆ. ಇದು ನನ್ನ ಸಂವಹನ ಕೌಶಲ್ಯವನ್ನು ಹೆಚ್ಚಿಸಿದೆ. ಸಮಸ್ಯೆಗಳನ್ನು ಪರಿಹರಿಸುವ ನೈಪುಣ್ಯವೂ ಹೆಚ್ಚಾಗಿದೆ. ಸಮಾಜದ ಬಗ್ಗೆ ಜವಾಬ್ದಾರಿತನ ಹೆಚ್ಚಾಗಿದೆ. ಪ್ರತಿದಿನವೂ ಹೊಸ ಅನುಭವಗಳನ್ನು ನೀಡುತ್ತದೆ.ಜನರ ಮುಖದಲ್ಲಿ ನಗು ಮೂಡಿಸುವುದು ಸಂತೋಷ ಕೊಡುತ್ತದೆ.

Youth For Seva ಅನುಭವ ನನ್ನನ್ನು ಉತ್ತಮ ವ್ಯಕ್ತಿಯಾಗಿ ರೂಪಿಸಿದೆ. ಈ ಬದಲಾವಣೆ ನನ್ನ ಜೀವನದ ಅತ್ಯುತ್ತಮ ನಿರ್ಧಾರವಾಗಿದೆ. ಸಮಾಜ ಸೇವೆಯಲ್ಲಿ ಭಾಗಿಯಾಗುವುದು ನಿಜವಾಗಿಯೂ ಹೆಮ್ಮೆ ತಂದಿದೆ.

Youth For Seva ಸಂಸ್ಕೃತಿ ಹಾಗು ಸೇವಾ ಮನೋಭಾವದ ಮೇಲೆ ನಿರ್ಮಿತವಾಗಿದೆ. ಸಮಾಜದ ಅಭಿವೃದ್ಧಿ ಮುಖ್ಯ ಗುರಿಯಾಗಿರುತ್ತದೆ. ಸ್ವಾರ್ಥವಿಲ್ಲದ ಸೇವೆ ಪ್ರಮುಖ ಮೌಲ್ಯವಾಗಿದೆ. ಸ್ವಯಂಸೇವಕರ ಪಾತ್ರ ಅತ್ಯಂತ ಮಹತ್ವದ್ದಾಗಿರುತ್ತದೆ.

ಸಮಾಜದಲ್ಲಿ ಬದಲಾವಣೆ ತರಲು ಪ್ರಯತ್ನಿಸಲಾಗುತ್ತದೆ.ಪಾರದರ್ಶಕತೆ ಮತ್ತು ಹೊಣೆಗಾರಿಕೆ ಕಾಪಾಡಲಾಗುತ್ತದೆ. ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಲಾಗುತ್ತದೆ. ಪ್ರಸ್ತುತ ಇದು ತುಂಬಾ ಅನಿವಾರ್ಯವಾಗುತ್ತದೆ. ಪರಿಸರ ಸಂರಕ್ಷಣೆಗೂ ಮಹತ್ವ ನೀಡಲಾಗುತ್ತದೆ. ಆರೋಗ್ಯ ಸೇವೆಗಳನ್ನು ಉತ್ತೇಜಿಸಲಾಗುತ್ತದೆ.ಗ್ರಾಮೀಣ ಅಭಿವೃದ್ಧಿಗೆ ವಿಶೇಷ ಗಮನ ನೀಡಲಾಗುತ್ತದೆ.ಸಂಸ್ಕೃತಿ ಮತ್ತು ಪರಂಪರೆಗಳನ್ನು ಕಾಪಾಡಲಾಗುತ್ತದೆ. ಸಮುದಾಯದ ಭಾಗವಹಿಸುವಿಕೆ ಉತ್ತೇಜಿಸಲಾಗುತ್ತದೆ. ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಹುಡುಕಲಾಗುತ್ತದೆ. ಎಲ್ಲರಿಗೂ ಸಮಾನ ಅವಕಾಶ ನೀಡಲಾಗುತ್ತದೆ. ಮಾನವೀಯ ಮೌಲ್ಯಗಳನ್ನು ಉಳಿಸಲಾಗುತ್ತದೆ. ಒಟ್ಟಾಗಿ ಉತ್ತಮ ಸಮಾಜ ನಿರ್ಮಾಣವೇ ಅಂತಿಮ ಗುರಿ.

ಇಂತಹ ಗೊಂದಲಗಳ ನಡುವೆ ನಾನು ಅರಿಸಿಕೊಂಡಿದ್ದು NGO. ಅದುವೇ YOUTH FOR SEVA. ಈ ಸಂಸ್ಥೆಯ ಧ್ಯೇಯ ಮತ್ತು ಉದ್ದೇಶಗಳು ವಿಭಿನ್ನವಾಗಿರುತ್ತದೆ. ಇಲ್ಲಿ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ಇವರು ಸೇವೆಗಾಗಿ ಪ್ರಮುಖ ಶಕ್ತಿಯಾಗಿದ್ದಾರೆ. ಯುವಜನರು ಸಮಾಜದ ಭವಿಷ್ಯವನ್ನು ರೂಪಿಸುವವರು. ಸೇವೆ ಮಾಡುವ ಮನೋಭಾವ ಯುವಕರಲ್ಲಿ ಹೆಚ್ಚಾಗಿರುತ್ತದೆ. ಯುವಕರು ತಮ್ಮ ಶಕ್ತಿಯನ್ನು ಒಳ್ಳೆಯ ಕೆಲಸಗಳಿಗೆ ಬಳಸಬೇಕು. ಸಮಾಜ ಸೇವೆ ಮಾಡುವುದರಿಂದ ವ್ಯಕ್ತಿತ್ವ ಅಭಿವೃದ್ಧಿ ಆಗುತ್ತದೆ. 

ಶಿಕ್ಷಣ ಸೇವೆಯಲ್ಲಿ ಯುವಕರು ಭಾಗವಹಿಸುತ್ತಾರೆ. ಪರಿಸರ ರಕ್ಷಣೆಯಲ್ಲಿ ಯುವಕರು ಮುಂಚೂಣಿಯಲ್ಲಿರುತ್ತಾರೆ. ಸ್ವಚ್ಛತಾ ಅಭಿಯಾನಗಳಲ್ಲಿ ಯುವಕರು ಅನೇಕ ಬಾರಿ ಭಾಗಿಯಾಗಿದ್ದಾರೆ. ರಕ್ತದಾನ ಮಾಡುವ ಮೂಲಕ ಜೀವ ಉಳಿಸುವ ಕೆಲಸ ನಿರಂತರವಾಗಿ ನಡೆಯುತ್ತದೆ. ಇಂದಿನ ಯುವಕರು ಸ್ವಯಂಸೇವಾ ಸಂಘಟನೆಗಳಲ್ಲಿ ಸೇರಬೇಕು. ಸಮಾಜದ ಸಮಸ್ಯೆಗಳನ್ನು ಪರಿಹರಿಸಲು ಯುವಕರು ಮುಂದೆ ಬರಬೇಕು. ಸೇವೆಯಿಂದ ಸಮಾಜದಲ್ಲಿ ಏಕತೆ ಹೆಚ್ಚುತ್ತದೆ. ಯುವಕರು ತಮ್ಮ ಸಮಯವನ್ನು ಸೇವೆಗೆ ಮೀಸಲಿಡಲಾಗುತ್ತದೆ .

ಸಮಾಜ ಸೇವೆ ವ್ಯಕ್ತಿಯ ಜವಾಬ್ದಾರಿಯಾಗಿದೆ. ಯುವಕರು ತಮ್ಮ ಸಾಮರ್ಥ್ಯವನ್ನು ಗುರುತಿಸಬೇಕು. ಸೇವೆಯ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಯುವಕರು ಸಹಕಾರದಿಂದ ಕೆಲಸ ಮಾಡಿ ಸಮಸ್ಯೆಗಳನ್ನು ಎದುರಿಸುವ ಧೈರ್ಯ ಸೇವೆಯಿಂದ ಬರುತ್ತದೆ. ಯುವಕರು ಮಾದರಿ ವ್ಯಕ್ತಿಗಳಾಗಿ ಸೇವೆಯೇ ಜೀವನದ ನಿಜವಾದ ಮೌಲ್ಯವೆಂದು ತೋರಿಸುತ್ತದೆ. ಯುವಕರೇ ದೇಶದ ಬೆನ್ನೆಲುಬು. ಹಾಗಾಗಿ ನಾವು ಯುವ ಜನತೆಯನ್ನು ಹೆಚ್ಚು ಗಮನದಲ್ಲಿ ಇಟ್ಟುಕೊಂಡು ಅವರ ಸರ್ವಾಂಗೀಣ ಬೆಳವಣಿಗೆಗೆ ಸಹಾಯ ಮಾಡಬೇಕು.

ಈ ಸಂಸ್ಥೆಯಲ್ಲಿ ಸೇರಿದ ನಂತರ ಆತ್ಮಬಲ ಹೆಚ್ಚಾಯಿತು. ನಾನು ಪ್ರಸ್ತುತ ಕೆಲಸ ಮಾಡುವ ವಿದ್ಯಾ ಚೇತನ ತಂಡವು ಪ್ರಮುಖವಾಗಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುತ್ತದೆ.  ಸಮಾಜದ ಅನೇಕ ವರ್ಗಗಳ ಜನರ ಸಂಪರ್ಕದಿಂದ ಅನೇಕ ವಿಷಯಗಳು ನನಗೆ ಅರಿವಾಗಿದೆ. ವಿದ್ಯಾ ಚೇತನ ಸ್ಕಾಲರ್ಷಿಪ್( scholarship ) ಹಣದಿಂದ ನಾವು ಮಾಡುವ ಕೆಲಸ ಹಲವು ಮಂದಿಗೆ ಉಪಯೋಗವಾಗುತ್ತದೆ ಎಂಬ ಖುಷಿ ನನ್ನದಾಗಿದೆ. ನನ್ನ ವೃತ್ತಿಯು ಹೀಗೆ ನಿತ್ಯ ನಿರಂತರವಾಗಿ ಸಾಗಲಿ ಎಂಬುದು   ನನ್ನ ಮನದಾಳದ ಆಶಯ.

Shobha
Vidyachetana co-ordinator
Youth For Seva, Bengaluru

Similar Posts

Leave a Reply

Your email address will not be published. Required fields are marked *